ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶಿರಸಿಯ  ಎರಡು ಮನೆಗಳಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂ ನಷ್ಟ

ಶಿರಸಿಯ  ಎರಡು ಮನೆಗಳಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂ ನಷ್ಟ

Tue, 16 Apr 2024 05:23:36  Office Staff   SOnews

 

ಶಿರಸಿ: ಶಿರಸಿಯ ಕಸ್ತೂರಬಾ ನಗರದಲ್ಲಿ ಸೋಮವಾರ ಸಂಜೆ ೮ಗಂಟೆ ಸುಮಾರು, ವಿದ್ಯುತ್ ಶಾರ್ಟ್ ಸೆರ್ಕ್ಯೂಟ್ ನಿಂದಾಗಿ ‌ಎರಡು ಮನೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಹತ್ತು ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ ಸಂಭಿಸಿದೆ ಎಂದು ವರದಿಯಾಗಿದೆ.

ಕಸ್ತೂರಬಾ ನಗರದ ಸನಾವುಲ್ಲ ಖಾನ್ ಎಂಬುವವರಿಗೆ ಸೇರಿದ ಎರಡು ಮನೆಗಳು ವಿದ್ಯುತ್ ಅವಘಡದಿಂದಾ ಸುಟ್ಟು ಭಸ್ಮಗೊಂಡಿವೆ ಎನ್ನಲಾಗಿದೆ. ಅದೃಷ್ಟಾವಶಾತ್ ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಬೀಗ ಹಾಕಿಕೊಂಡು ಸಂಬಂಧಿಕರ ಮನೆಗಳಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಸಂಜೆ ೮ ಗಂಟೆ ಸುಮಾರು ಮನೆಯಿಂದ ಹೊಗೆ ಬರಲು ಆರಂಭಿಸಿತ್ತು ಎನ್ನಲಾಗಿದ್ದು ನೋಡು ನೋಡುತ್ತಿದ್ದಂತೆ ಬೆಂಕಿಯು ಹೊರಗಡೆ ಚಾಚಿಕೊಂಡಿದೆ. ಪಕ್ಕದ ಮನೆಗೆ ಕೂಡ ಬೆಂಕಿ ಆವರಿಸಿಕೊಂಡಿದ್ದು ಎರಡು ಮನೆಗಳನ್ನು ಸುಟ್ಟುಹಾಕಿದೆ.

ಘಟನೆ ನಡೆಯುತ್ತಿದ್ದಂತೆ ಸ್ಥಳಿಯ ಯುಕವರು ಸಕ್ರೀಯವಾಗಿದ್ದು ಮನೆಗೆ ಹಾಕಿದ್ದ ಬೀಗವನ್ನು ಒಡೆದು ಕೆಲವೊಂದು ವಸ್ತುಗಳನ್ನು ಹೊರಗೆ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು ಅಗ್ನಿ ನಂದಿಸುವಲ್ಲಿ ಸಕ್ರೀಯರಾಗಿದ್ದಾರೆ ಎಂದು ತಿಳಿದುಬಂದಿದೆ.


Share: